Hammersons Gold Articles Pvt ltd

Hammersons Gold Articles Pvt ltd

Share

Contact information, map and directions, contact form, opening hours, services, ratings, photos, videos and announcements from Hammersons Gold Articles Pvt ltd, Belgaum.

02/04/2022

ಸರ್ವರಿಗೂ ಯುಗಾದಿ ಹಬ್ಬದ ಶುಭಾಶಯಗಳು.... ಶ್ರೀ ಜಗನ್ಮಾತೆ ಕಾಳಿಕಾದೇವಿಯು ತಮಗೆಲ್ಲರಿಗೂ ಸುಖ ಶಾಂತಿ ಸಮೃದ್ಧಿ ಐಶ್ವರ್ಯ ನೀಡಲೆಂದು ಆಶಿಸುತ್ತೇವೆ.

08/03/2022

ವಿಶ್ವ ಮಹಿಳಾ ದಿನಾಚರಣೆಯ ಶುಭಾಶಯಗಳು...

"ನಿಮ್ಮ ನಗುವಿಗೆ ನಮ್ಮ ಆಭರಣ"

Gajanana Sabannavar
Chairman Hammersons Gold Articles Pvt Ltd, Belagavi

14/01/2022

On this auspicious day dedicated to harvesting, I hope that the almighty give you the strength to harvest all the happiness and success that you and your family deserve. Happy Makar Sankranti
Gajanana Sabannavar
Chairman: Hammersons Gold Articles Pvt Ltd, Belagavi

01/01/2022

ಎಲ್ಲ ವಿಶ್ವಕರ್ಮ ಬಾಂಧವರಿಗೂ ಮತ್ತು ಕರಕುಶಲಕರ್ಮಿಗಳಿಗೆ ಹೊಸವರ್ಷದೊಂದಿಗೆ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯ ಶುಭಾಶಯಗಳು!

ನಾವು ಭಗವಂತನನ್ನು ನೋಡಿದ್ದೇವೆಯೇ ? ನೋಡಿಲ್ಲ..! ಆದರೂ ಭಗವಂತನಲ್ಲಿ ನಂಬಿಕೆ ಇದೆ. ಭಗವಂತನಲ್ಲಿ ಅಚಲವಾದ ವಿಶ್ವಾಸವಿದೆ. ಭಗವಂತನಿಲ್ಲದೆ ಜಗತ್ತಿನಲ್ಲಿ ಏನು ಸೃಷ್ಟಿಯಾಗಲಾರದು ಎಂದು ನಮಗೆ ಗೊತ್ತಿದೆ. ಆದರೂ ಕೆಲವು ವ್ಯಕ್ತಿಗಳು ಭಗವಂತನಲ್ಲಿ ವಿಶ್ವಾಸವಿಲ್ಲ. ನಾಸ್ತಿಕರಾಗಿ, ಅಜ್ಞಾನಿಗಳಾಗಿ, ಜೀವನದ ಅರ್ಥವನ್ನು ಅರಿಯದೆ ಪ್ರಾಣಿಗಳಂತೆಯೇ ಜೀವಿಸುತ್ತಿದ್ದನ್ನು ನಾವು ಕಂಡಿದ್ದೇವೆ. ಅಮರಶಿಲ್ಪಿ ಜಕಣಾಚಾರ್ಯರನ್ನು ಕೂಡಾ ನಾವು ನೀವು ನೋಡಿಲ್ಲ. ಅವನಿಲ್ಲದೆ ಗುಡಿಗೋಪುರಗಳು, ದೇವಾನುದೇವತೆಗಳ ಶಿಲ್ಪಗಳು ಸೃಷ್ಟಿಯಾಗಿಲ್ಲವೆಂದು ನಮಗೆ ಗೊತ್ತಿದೆ. ಅವನು ನಮ್ಮಲ್ಲಿಯೇ ನೆಲೆಸಿದ್ದಾನೆ ಎಂದು ನಮಗೆ ಅಚಲ ವಿಶ್ವಾಸವಿದೆ. ವಿಶ್ವಬ್ರಾಹ್ಮಣರ ಕಲೆಯನ್ನು ಅರಿಯದವರು, ನಮ್ಮ ಸನಾತನ ಸಂಸ್ಕಾರವನ್ನು ಅರಿಯದ ಅಜ್ಞಾನಿಗಳು ಅಮರಶಿಲ್ಪಿ ಜಕಣಾಚಾರ್ಯ ಬಗ್ಗೆ ಮತ್ತು ಅವರ ಅಸ್ತಿತ್ವದ ಬಗ್ಗೆ ಸಂಶಯ ವ್ಯಕ್ತಪಡಿಸುವುದು ಸಹಜ. ಅದು ಅವರ ಅಜ್ಞಾನ. ಅದು ಅವರ ವಿಕೃತ ಮನಸ್ಸು. ಮೂರ್ಖರಿಗೆ ಅಮರಶಿಲ್ಪಿ ಜಕಣಾಚಾರ್ಯರ ಅಸ್ತಿತ್ವವನ್ನು ಸಾಬೀತು ಪಡಿಸುವ ಅವಶ್ಯಕತೆಯೇ ಇಲ್ಲ. ಭಗವಂತನ ಅಸ್ತಿತ್ವವನ್ನು ಸಾಬೀತು ಪಡಿಸುವ ಅವಶ್ಯಕತೆ ಇದೆಯೇ? ಇಲ್ಲವಲ್ಲ..! ಹಾಗೆಯೇ ಅಮರಶಿಲ್ಪಿಯ ಅಸ್ತಿತ್ವವನ್ನು ಮತ್ತು ಇತಿಹಾಸವನ್ನು ಸಾಬೀತುಪಡಿಸಲು ನಿಮ್ಮ ಶಕ್ತಿಯನ್ನು ವಿನಿಯೋಗಿಸುವ ಅವಶ್ಯಕತೆಯಿಲ್ಲ. ಅದು ನಮ್ಮ ಮೂರ್ಖತನವಾದೀತು. ನಾವು ಯಾರು? ನಮ್ಮ ಶಕ್ತಿಯೇನು? ಇವುಗಳ ಪ್ರದರ್ಶನ ಮಾಡುವುದಕ್ಕೆ ನಮ್ಮ ಸಮಯವನ್ನು ಹಾಳು ಮಾಡುವುದು ಬೇಡ. ಈಗ ನಮ್ಮನ್ನು ನಾವೇ ನಾವು ಯಾರು? ನಮ್ಮ ಶಕ್ತಿ ಏನು? ನಾವು ಮುಂದೆ ಸಾಗುವ ದಾರಿ ಯಾವುದು? ನಮ್ಮ ಜೀವನದ ಗುರಿ ಏನು? ನಮ್ಮ ಸಮಾಜದ ಮುಂದಿನ ಪೀಳಿಗೆಗೆ ನಾವು ಕೊಡಬೇಕಾದ ಕೊಡುಗೆ ಏನು? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಾಗಿದೆ. ಅದಕ್ಕಾಗಿ ನಾವೆಲ್ಲಾ ಒಂದಾಗೋಣ. ನಮ್ಮನ್ನು ನಾವು ಅರಿಯೋಣ. ನಮ್ಮಲ್ಲಿರುವ ಕಲಿಯನ್ನು ತಿಳಿಯೋಣ. ಅದರ ಮೇಲೆ ಅಪಾರವಾದ ನಂಬಿಕೆಯನ್ನು ಬೆಳೆಸಿಕೊಳ್ಳೋಣ. ನಮ್ಮ ಕಾಯಕಗಳ ಮೇಲೆ ಶ್ರದ್ಧೆ ಇರಿಸೋಣ. ನಮ್ಮನ್ನು ನಾವು ಆರ್ಥಿಕವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬೆಳೆಯಲು ಒಂದಾಗೋಣ.

ಇದು ಕೇವಲ ಅಮರಶಿಲ್ಪಿ ಜಕಣಾಚಾರಿ ಸಂಸ್ಕರಣಾ ದಿನಾಚರಣೆಯಾಗದೆ ಅಮರಶಿಲ್ಪಿ ಹಾಕಿಕೊಟ್ಟ ಸಂಸ್ಕಾರ ದಿನಾಚರಣೆ ಆಗಬೇಕು. ವಿಶ್ವಕರ್ಮ ಸಮಾಜದ ಪಂಚ ಕಸುಬುದಾರರ ರಕ್ತದ ಪ್ರತಿಯೊಂದು ಕಣದಲ್ಲಿ ಅಮರಶಿಲ್ಪಿ ನೆಲೆಸಿದ್ದಾನೆ. ನಾವು ಕಲೆಯ ಆರಾಧಕರಾದ ಬೇಕು. ಪೋಷಕರ ಆಗಬೇಕು. ಕಲೆಯು ಕೇವಲ ಮಾರಾಟದ ವಸ್ತು ಆಗಬಾರದು. ಅದು ನಿಮ್ಮ ಜೀವನೋಪಾಯದ ಮಾರ್ಗ. ಆ ವೃತ್ತಿಯನ್ನು ಗೌರವಿಸಿ. ಪೂಜಿಸಿ. ಆ ವೃತ್ತಿಗೆ ನಮ್ಮಲ್ಲಿ ಬೇಕಾಗುವ ವ್ಯಕ್ತಿತ್ವ ಮತ್ತು ಯೋಗ್ಯತೆಯನ್ನು ಸಂಪಾದಿಸ ಬೇಕಾಗುವುದು. ನಾವು ವಿಶ್ವಕರ್ಮ ಬ್ರಾಹ್ಮಣರಾಗಿ ನಮ್ಮ ಸನಾತನ ಧರ್ಮದ ಪ್ರತಿದಿನದ ದೇವತಾ ಅನುಷ್ಠಾನ, ಸಂಧ್ಯಾವಂದನೆ, ಪೂಜಾವಿಧಾನಗಳನ್ನು ತಪ್ಪದೇ ಆಚರಿಸುತ್ತ ನಮ್ಮಲ್ಲಿ ವಂಶಪಾರಂಪರಗತವಾಗಿ ಬಂದ ಕಲೆಯ ಆರಾಧಕರಾಗ ಬೇಕು! ನಮ್ಮ ವೈದಿಕ ಸಂಸ್ಕೃತಿಯನ್ನು ಪಾಲಿಸಬೇಕು. ಕಣ್ಣಿಗೆ ಕಾಣದ ಭಗವಂತನನ್ನೇ ಮಾನವಕುಲಕ್ಕೆ ಸಾಕ್ಷಾತ್ಕರಿಸುವ ಶಿಲ್ಪಿಗಳು ನಾವು. ಜೀವನದ ಪ್ರತಿಯೊಂದು ಹಂತದಲ್ಲೂ, ಹೆಜ್ಜೆಹೆಜ್ಜೆಗೂ ಬೇಕಾಗುವ ವಸ್ತುಗಳನ್ನು ಸೃಷ್ಟಿಸುವ ನಾವು ಒಳ್ಳೆಯ ಸಂಸ್ಕಾರ, ಸತ್ಯಾಚರಣೆ, ಪ್ರಾಮಾಣಿಕ ಸದ್ಗುಣಗಳನ್ನು ಹೊಂದಿದ ವಿಶ್ವಬ್ರಾಹ್ಮಣರಾಗಿ, ಅಮರಶಿಲ್ಪಿಯ ವಂಶಸ್ತರಾಗಿ, ಸ್ವಾಭಿಮಾನಿಗಳಾಗಿ ಬದುಕಬೇಕು. ಆಗಲೇ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆಯು ಅರ್ಥಪೂರ್ಣವಾಗುವುದು.

ಗಜಾನನ ಸಾಬಣ್ಣವರ
ಚೇರ್ಮನರು; ಹ್ಯಾಮರ್ಸನ್ಸ ಗೋಲ್ಡ್ ಆರ್ಟಿಕಲ್ಸ್ ಪ್ರೈವೇಟ್ ಲಿಮಿಟೆಡ್, ಬೆಳಗಾವಿ.

Photos from Hammersons Gold Articles Pvt ltd's post 16/12/2021

ವಿಶ್ವಕರ್ಮ ಸಮಾಜದ ಸರ್ವಶ್ರೇಷ್ಠರು, ಪರಮಪೂಜ್ಯರು, ರಾಷ್ಟ್ರ ಸಂತರಾದ ಶ್ರೀಶ್ರೀಶ್ರೀ ಶಿವಾತ್ಮಾನಂದ ಮಹಾಸ್ವಾಮಿಗಳು ರಸ್ತೆ ಅಪಘಾತದಲ್ಲಿ ಅಸ್ವಸ್ಥರಾಗಿ ವಿಧಿವಶರಾಗಿದ್ದು, ಅವರ ಅಂತಿಮ ದರ್ಶನ ಪಡೆಯಲು ಮತ್ತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಹ್ಯಾಮರ್ಸನ್ಸ್ ಗೋಲ್ಡ್ ಆರ್ಟಿಕಲ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಕೃಷ್ಣಕುಮಾರ ಸಾಬಣ್ಣವರ ಹೋಗಿದ್ದರು. ಅವರಿಗೆ ನಮ್ಮ ಸಂಸ್ಥೆಯವತಿಯಿಂದ ಹೃದಯಪೂರ್ವಕವಾದ ಶ್ರದ್ಧಾಂಜಲಿ ಅರ್ಪಿಸಿದರು. ಸಮಾಜದ ಏಕತೆಗಾಗಿ ಮತ್ತು ಅದರ ಸರ್ವತೋಮುಖ ಬೆಳವಣಿಗೆಗಾಗಿ ಶ್ರಮಿಸಿ, ಆಧ್ಯಾತ್ಮಿಕ ಚಿಂತನೆಯೊಂದಿಗೆ ಅದನ್ನು ತಿದ್ದಿ ತೀಡಿದ ಸಮಾಧಿ ಹಿತಚಿಂತಕರನ್ನು ಕಳೆದುಕೊಂಡಂತಾಗಿದೆ.
ದುಃಖತಪ್ತರು
ಗಜಾನನ್ ಸಾಬಣ್ಣವರ್ ಮತ್ತು ಅವರ ಕುಟುಂಬ
ಹ್ಯಾಮರ್ಸನ್ಸ್ ಗೋಲ್ಡ್ ಆರ್ಟಿಕಲ್ಸ್ ಪ್ರೈವೇಟ್ ಲಿಮಿಟೆಡ್, ಬೆಳಗಾವಿ.
ಲೋಕಪ್ರಿಯ ಜನ ಸೇವಾ ಸಂಸ್ಥೆ, ಬೆಳಗಾವಿ

14/12/2021

Sometime family functions and marriages also giving an opportunity to meet great personalities. I met leading Saraf gold business man Shri Chandrashekhar Harihar at Ilkal. It's just meet & greet.

Photos from Hammersons Gold Articles Pvt ltd's post 07/12/2021

ಎಂತಹ ಅದ್ಭುತ ! ಇಂತಹ ವಿಶ್ವಕರ್ಮ ಕಲಾಕಾರರ ಅದ್ಭುತ ಕರ ಕೌಶಲ್ಯತೆಯನ್ನು ನೋಡಿ ವಿಸ್ಮಯರಾಗುವುದು ಸಹಜ. ಇತ್ತೀಚೆಗೆ ವಿಶ್ವಕರ್ಮ ಸಮಾಜದ ಶಕ್ತಿಪೀಠ ಶಿರಸಂಗಿ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮದ ನಿಮಿತ್ಯ ಕಲಾ ಶಿಬಿರವನ್ನು ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ, ಶಿರಸಂಗಿ ಇವರ ನೇತೃತ್ವದಲ್ಲಿ ನಡೆದಿತ್ತು. ಕಾರ್ಯಕ್ರಮದ ಕೆಲವು ಮುಖ್ಯ ಫೋಟೋಗಳನ್ನು ಸಮಾಜದ ಹಿತಚಿಂತಕರು ನನಗೆ ವಾಟ್ಸಪ್ ಮುಖಾಂತರ ಕಳಿಸಿದ್ದರು. ಈ ಅದ್ಭುತವಾದ ಕೆಲಸಗಳನ್ನು ನೋಡಿ ನನಗೆ ತುಂಬಾ ಬೇಸರವಾಗುತ್ತದೆ. ಏಕೆಂದರೆ ನನ್ನ ವೈಯಕ್ತಿಕ ಅನೇಕ ಕೆಲಸಗಳ ಒತ್ತಡದಿಂದ ಈ ಶಿಬಿರಕ್ಕೆ ಭೇಟಿ ಕೊಡಲು ಸಾಧ್ಯವಾಗಲಿಲ್ಲ. ಕ್ಷಮಿಸಿ! ಶಿಬಿರದಲ್ಲಿ ಪಾಲ್ಗೊಂಡ ಎಲ್ಲ ಕರಕುಶಲ ಕಲಾಕಾರರಿಗೆ ನನ್ನ ಕೋಟಿ ಕೋಟಿ ನಮಸ್ಕಾರಗಳು. ಇವರ ಕೈಗಳಲ್ಲಿ ಸಾಕ್ಷಾತ್ ಸರಸ್ವತಿ ನೆಲೆಸಿದ್ದಾಳೆ. ವಿಶ್ವಕರ್ಮ ಸಮಾಜದ ಮಹಾನ್ ಶಿಲ್ಪಿಗಳಾದ ಶ್ರೀ ಜಕಣಾಚಾರ್ಯ, ಡಕಣಾಚಾರ್ಯರು ಇವರಲ್ಲಿ ಪರಕಾಯಪ್ರವೇಶ ಮಾಡಿದ್ದಾರೆಂದರೆ ಉತ್ಪ್ರೇಕ್ಷೆಯಾಗಲಾರದು. ಈ ಕಲಾ ಶಿಬಿರವನ್ನು ಆಯೋಜಿಸಿ ಈ ಎಲ್ಲ ಕರಕುಶಲಕರ್ಮಿಗಳಿಗೆ ಪ್ರೋತ್ಸಾಹ ನೀಡಿದ ಶಿರಸಂಗಿ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಗೆ ನನ್ನ ಹೃದಯಪೂರ್ವಕವಾದ ಧನ್ಯವಾದಗಳು.

ಆದರೆ ಈ ಕಲೆಗೆ ಯೋಗ್ಯ ಬೆಲೆ ಸಿಗಬೇಕಾಗಿದೆ. ಆದುದರಿಂದ ಈ ಕುಶಲ ಕಲಾಕಾರರಿಗೆ ಆಧುನಿಕ ಮಾರುಕಟ್ಟೆಯ ಮತ್ತು ಮಾರಾಟ ವಿಕ್ರಯ ಕಲೆಯ ತರಬೇತಿಯನ್ನು ನೀಡುವುದು ಅವಶ್ಯಕವಾಗಿದೆ. ಇವರಿಗೆ ಅನೇಕ ಮೂಲಭೂತ ಸೌಕರ್ಯಗಳು ಸಿಕ್ಕಿಲ್ಲ. ಇವರಿಗೆ ಪೋಷಕರ ಅವಶ್ಯಕತೆ ಇದೆ. ಇವರ ವಸ್ತುಗಳನ್ನು ಯೋಗ್ಯ ಬೆಲೆಗಳಿಗೆ ಮಾರಾಟ ಮಾಡಲು ಆಧುನಿಕ ಸೌಕರ್ಯಗಳನ್ನು ಹೊಂದಿದೆ ಮಾರುಕಟ್ಟೆಯ ವ್ಯವಸ್ಥೆಯು ಯೋಗ್ಯ ಸ್ಥಳದಲ್ಲಿ ನಿರ್ಮಾಣವಾಗಬೇಕಾಗಿದೆ. ದೇಶ-ವಿದೇಶದ ಕಲಾವಿದರನ್ನು ಮತ್ತು ಅವುಗಳಲ್ಲಿ ಆಸಕ್ತಿ ಇರುವ, ಖರೀದಿಸುವ ಜನರನ್ನು ಆಕರ್ಷಿಸಲು "ಶ್ರೀ ವಿಶ್ವಕರ್ಮ ಕರಕುಶಲ ಕಾರ್ಮಿಕರ ಕಲಾ ಸಂಗ್ರಹಾಲಯ" ದ ಅವಶ್ಯಕತೆ ಇದೆ. ಇದನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರಮಾಡಲು ಆಧುನಿಕ ಸಾಮಾಜಿಕ ಜಾಲತಾಣಗಳನ್ನು ಮತ್ತು ಪ್ರಚಾರ ಮಾಧ್ಯಮಗಳನ್ನು ಸರಿಯಾದ ನಿಟ್ಟಿನಲ್ಲಿ ಉಪಯೋಗಿಸಬೇಕಾಗಿದೆ. ಆಗ ವಿಶ್ವಕರ್ಮ ಸಮಾಜವು ಆರ್ಥಿಕವಾಗಿ ಬೆಳೆಯಲು ಸಾಧ್ಯವಾಗಬಹುದು. ಸಮಾಜದ ಹಿತಚಿಂತಕರು, ವಿದ್ವಾಂಸರು, ಪೀಠಾಧಿಪತಿಗಳು ಈ ನಿಟ್ಟಿನಲ್ಲಿ ಒಂದಾಗಿ ಸಮಗ್ರವಾಗಿ ಚಿಂತನೆ ಮಾಡಿ, ಅನವಶ್ಯಕವಾಗಿ ರಾಜಕೀಯದಲ್ಲಿ ಮತ್ತು ಅದರ ಸ್ವಾರ್ಥಕ್ಕೆ ಬಳಸುವ ವ್ಯಕ್ತಿಗಳ ಹಿಂದೆ ಬೆನ್ನುಹತ್ತಿ ತಮ್ಮ ಸಮಯವನ್ನು ವ್ಯರ್ಥ ಗೊಳಿಸದೆ, ಸಮಾಜದ ಒಳಿತಿಗಾಗಿ ಚಿಂತಿಸಲು, ಆರ್ಥಿಕವಾಗಿ ಬೆಳೆಯಲು, ನಮ್ಮ ಉದ್ಯೋಗಗಳನ್ನು ಇನ್ನೂ ಹೆಚ್ಚು ವೃದ್ಧಿಸಿ ಬಲಪಡಿಸಲು ಕರೆ ನೀಡಿ ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕಿದೆ. ವಿಶ್ವಕರ್ಮ ಸಮಾಜವು ಒಂದಾಗಿ ಸಮಾಜದ ಎಲ್ಲ ಕರಕುಶಲ ಕಾರ್ಮಿಕರ ಒಳಿತಿಗಾಗಿ ಚಿಂತಿಸಿ, ಕಾರ್ಯೋನ್ಮುಖರಾದರೆ, "ಶ್ರೀ ವಿಶ್ವಕರ್ಮ ಕರಕುಶಲ ಕಾರ್ಮಿಕರ ಕಲಾ ಸಂಗ್ರಹಾಲಯ" ನಿರ್ಮಿಸುವುದು ದೊಡ್ಡ ಕೆಲಸವಲ್ಲ.
ಧನ್ಯವಾದಗಳು.

ಗಜಾನನ್ ಸಾಬಣ್ಣವರ್
ಚೇರ್ಮನ್ನರು ; ಹ್ಯಾಮರ್ಸನ್ಸ ಆರ್ಟಿಕಲ್ಸ್ ಪ್ರೈವೇಟ್ ಲಿಮಿಟೆಡ್, ಬೆಳಗಾವಿ

02/11/2021

The festival of lights brings happiness and positivity. May the Goddess shower you with everything you need on this auspicious day.

Gajanana Sabannavar
Chairman Hammersons Gold Articles Pvt Ltd, Belagavi

15/10/2021

Good wishes for a joyous Vijayadashmi! May Goddess Kalika Mata grant all your wishes and bless you with good health, success and happiness.
Happy Vijayadashami!
Happy Dussehra!
Gajanana Sabannavar
Chairman;
Hammersons Gold Articles Pvt Ltd Belagavi

14/10/2021

ಆಯುಧಪೂಜೆ - ನವರಾತ್ರಿಯ ಶುಭಾಶಯಗಳು...
ಶ್ರೀ ಕಾಳಿಕಾ ಮಾತೆ ಎಲ್ಲರಿಗೂ ಶುಖ, ಶಾಂತಿ, ಸಮೃದ್ಧಿ, ಐಶ್ವರ್ಯ, ಆರೋಗ್ಯ ನೀಡಲಿ

17/09/2021

ಸಮಸ್ತ ವಿಶ್ವಕರ್ಮ ಬಾಂಧವರಿಗೆ, ಶ್ರೀ ವಿಶ್ವಕರ್ಮ ಮಹೋತ್ಸವದ ಶುಭಾಶಯಗಳು!

ಈ ಶುಭ ಸಂದರ್ಭದಲ್ಲಿ ನನ್ನ ಅನುಭವ ಮತ್ತು ವಿಚಾರವನ್ನು ತಮ್ಮಲ್ಲಿ ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಕೆಲವು ದಿನಗಳ ಹಿಂದೆ ಬಾಗಲಕೋಟೆಯಲ್ಲಿರುವ ಶ್ರೀ ಗಾಯಿತ್ರಿ ಲೋಹ ಶಿಲ್ಪ ಕಲಾಕೇಂದ್ರ ಸಂಸ್ಥೆಗೆ ನನ್ನ ಪರಿವಾರದೊಂದಿಗೆ ಬಿಟ್ಟಿ ಕೊಟ್ಟಿದ್ದೆ. ಈ ಸಂಸ್ಥೆಯ ಮುಖ್ಯಸ್ಥ ಶ್ರೀ ಮೌನೇಶ್ ಬಂಡಿ ಇವರು ಉತ್ಕೃಷ್ಟ ಶ್ರೇಷ್ಠ ಮತ್ತು ಅನುಭವಿ ಲೋಹ ಶಿಲ್ಪ ಕಲಾಕಾರರಾಗಿದ್ದಾರೆ. ಇವರ ಹಸ್ತದಿಂದ ನಮ್ಮ ಮನೆಯಲ್ಲಿ ಪೂಜಿಸಲು ಶ್ರೀ ಕಾಳಿಕಾ ಮಾತೆಯ ವಿಗ್ರಹವನ್ನು ಮಾಡಿಸಿದ್ದು, ಇವರು ತಯಾರಿಸಿದ ಪಂಚಲೋಹ ಮತ್ತು ಬೆಳ್ಳಿ ಅನೇಕ ದೇವತಾ ವಿಗ್ರಹಗಳನ್ನು ನೋಡಿದೆ. ಅಪ್ರತಿಮ ಕಲಾಕಾರ. ಇವರ ಜೊತೆ ಶಿಲ್ಪಕಲೆ ಮತ್ತು ಅದರ ಉದ್ಯೋಗದ ಬಗ್ಗೆ ಅನೇಕ ವಿಚಾರಗಳನ್ನು ಅವರೊಂದಿಗೆ ಚರ್ಚಿಸಿದೆ. ಅವರ ಆರ್ಥಿಕ ಪರಿಸ್ಥಿತಿ ಮತ್ತು ಜೀವನ ಮಟ್ಟವನ್ನು ನೋಡಿ ತುಂಬಾ ಖಸಿಬಿಸಿ ಆಯಿತು. ಇವರ ಮನೆಯು ಅತ್ಯಂತ ದುಸ್ಥಿತಿಯಲ್ಲಿತದ್ದು, ಮಲಗಲು ಮತ್ತು ಕೆಲಸ ಮಾಡಲು ಯಾವುದೇ ವ್ಯವಸ್ಥೆ ಇಲ್ಲ. ಜೀವನ ನಡೆಸಲು ಬೇಕಾಗುವ ಕನಿಷ್ಠ ಸೌಲಭ್ಯಗಳು ಕೂಡ ಇಲ್ಲ. ಇದು ಒಬ್ಬ ಶ್ರೀ ಮೌನೇಶ್ ಬಂಡೆಯ ಕಥೆಯಲ್ಲ. ಇಂತಹ ಅನೇಕ ಸುವರ್ಣಕಾರರು, ಬಡಿಗ, ಶಿಲ್ಪ ಕಲಾಕಾರರು, ಕರಕುಶಲಕರ್ಮಿಗಳು ನಮ್ಮ ವಿಶ್ವಕರ್ಮ ಸಮಾಜದಲ್ಲಿ ಬಡತನದಿಂದ ಜೀವಿಸುತ್ತಿದ್ದಾರೆ. ಇವರು ತಮ್ಮ ಕಲೆಯಿಂದ ತಮ್ಮ ಆರ್ಥಿಕ ಬೆಳವಣಿಗೆಯನ್ನು ಕಾಣಲು ಸಾಧ್ಯವೇ ಇಲ್ಲ. ಏಕೆಂದರೆ ಕಲೆಯು ವ್ಯಾಪಾರಕ್ಕೆ ಇಡುವ ವಸ್ತುವಲ್ಲ. ಕಲೆಯನ್ನು ಹಣದಿಂದ ಅಳೆಯಲು ಸಾಧ್ಯವಿಲ್ಲ. ಇವರಿಗೆ ಪೋಷಕರ ಅವಶ್ಯಕತೆ ಇದೆ. ನಮ್ಮ ಪೂರ್ವ ಇತಿಹಾಸವನ್ನು ಕೆಣಕಿದಾಗ ಕೂಡಾ, ಕಲಾವಿದರನ್ನು ರಾಜಮಹಾರಾಜರು ಪೋಷಿಸಿದ್ದುಂಟು,
ಆದ್ದರಿಂದಲೇ ನಮ್ಮ ಭಾರತದಲ್ಲಿ ಅನೇಕ ಶಿಲ್ಪಕಲೆಗಳನ್ನು ನೋಡಬಹುದಾಗಿದೆ.

ವಿಶ್ವಕರ್ಮ ಸಮಾಜದ ನಾವು ಉತ್ಕೃಷ್ಟ ಬ್ರಾಹ್ಮಣರು, ಸರ್ವ ಶ್ರೇಷ್ಠರು, ಸೃಷ್ಟಿಕರ್ತರು, ಸುಸಂಸ್ಕೃತರು ಮತ್ತು ಎಲ್ಲಾ ಸಮಾಜ ಬಾಂಧವರಿಗೆ ಅವಶ್ಯಕವಿರುವ ವ್ಯಕ್ತಿ ಮಹತ್ವ ಎಂದೆಲ್ಲಾ ಹೇಳಿಕೊಳ್ಳುವ ನಾವು ನಿಜವಾಗಿಯೂ ಇದಕ್ಕೆ ಯೋಗ್ಯರೆ? ನಾವು ಅಂತಹ ಉನ್ನತ ಜೀವನ ಸಾಗಿಸುತ್ತಿದ್ದೇವೆಯೇ? ನಿಜವಾಗಿಯೂ ನಾವು ಸಮಾಜದಲ್ಲಿ ಗೌರವದಿಂದ ಜೀವಿಸುತ್ತಿದ್ದೇವೆ? ಜನರು ನಮ್ಮನ್ನು ಗೌರವಿಸುತ್ತಿದ್ದಾರೆಯೇ? ಈ ಎಲ್ಲ ಪ್ರಶ್ನೆಗಳಿಗೆ ಸಮಾಜದ ಗುರುಹಿರಿಯರು, ಮಠಾಧಿಪತಿಗಳು, ಉದ್ಯೋಗಪತಿಗಳು, ರಾಜಕಾರಣದಲ್ಲಿ ಸಕ್ರಿಯವಾಗಿ ಭಾಗವಹಿಸುವ ನಮ್ಮ ಸಮಾಜದ ಕಾರ್ಯಕರ್ತರು ಒಂದಾಗಿ ಉತ್ತರವನ್ನು ಹುಡುಕುವ ಪ್ರಯತ್ನ ಮಾಡಬೇಕಾಗಿದೆ.

ಸಮಾಜದಲ್ಲಿ ಜಾತ್ರಾ ಮಹೋತ್ಸವಗಳನ್ನು, ಜಯಂತೋತ್ಸವಗಳನ್ನು ಉಜ್ರಂಭಣೆಯಿಂದ ಆಚರಿಸುವುದು, ಸಾವಿರಾರು ಜನ ಕೂಡುವುದು ಮತ್ತು ಪ್ರಸಾದದ ಹೆಸರಿನಲ್ಲಿ ಊಟೋಪಚಾರಕ್ಕೆ ಖರ್ಚು ಮಾಡುವುದು, ಇವೆಲ್ಲವುಗಳು ವ್ಯರ್ಥ. ಸಮಾಜದ ಏಳಿಗೆಯಲ್ಲಿ ಮತ್ತು ಅದರ ಆರ್ಥಿಕ ಪ್ರಗತಿಯಲ್ಲಿ ಇವುಗಳು ಯಾವ ಪಾತ್ರವನ್ನು ವಹಿಸುವುದಿಲ್ಲ. ನಿಜಸ್ವರೂಪದಲ್ಲಿ ಶ್ರೀ ವಿಶ್ವಕರ್ಮ ಪ್ರಭುವಿನ ಆರಾಧನೆಯನ್ನು ಮಾಡಬೇಕಾದರೆ ಅಥವಾ ಶ್ರೀ ವಿಶ್ವಕರ್ಮ ಮಹೋತ್ಸವವನ್ನು ಆಚರಿಸಬೇಕಾದರೆ ನಮ್ಮ ವಿಶ್ವಕರ್ಮ ಸಮಾಜದ ಪಂಚ ಕುಲಕಸುಬುಗಳನ್ನು ಹೊರತುಪಡಿಸಿ, ಇನ್ನಿತರ ಉದ್ಯೋಗ, ವ್ಯಾಪಾರ ಸರ್ಕಾರ ಮತ್ತು ಸರ್ಕಾರೇತರ ಕೆಲಸಗಳಲ್ಲಿ ತೊಡಗಿದ ಸಮಾಜದ ಬಾಂಧವರು ತಮ್ಮ ತಮ್ಮ ಕ್ಷೇತ್ರದಲ್ಲಿ ವಾಸಿಸುವ ಯೋಗ್ಯ ಮತ್ತು ಬಡ ಕರಕುಶಲ ಕಾರ್ಮಿಕರನ್ನು ಶಿಲ್ಪಿಗಳನ್ನು ಆಯ್ಕೆ ಮಾಡಿ, ತನು-ಮನ, ಧನದಿಂದ ಸಹಾಯ ಒದಗಿಸಿ, ಪೋಷಕರಾಗ ಬೇಕಾಗುತ್ತದೆ. ಅವರಿಗೆ ಕನಿಷ್ಠ ಸೌಲಭ್ಯಗಳನ್ನು ಒದಗಿಸಿ ಅವರಲ್ಲಿರುವ ಕಲೆಯನ್ನು ಪೋಷಿಸುವುದು ಮತ್ತು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡಬೇಕಾಗುತ್ತದೆ. ಇಂತಹ ಸಮಾಜದ ಅಭಿವೃದ್ಧಿ ಕಾರ್ಯಗಳಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡು, ನಿಜ ಅರ್ಥದಲ್ಲಿ ಶ್ರೀ ವಿಶ್ವಕರ್ಮ ಮಹೋತ್ಸವವನ್ನು ಆಚರಿಸಬೇಕಾಗಿದೆ.

ಇದು ನನ್ನ ವೈಯಕ್ತಿಕ ಅಭಿಪ್ರಾಯ, ಕೆಲವರಿಗೆ ಇದು ಇಷ್ಟವಾಗದೇ ಇರಬಹುದು. ಅವರ ವಿಚಾರದಲ್ಲಿ ಇದು ತುಂಬಾ ವಿಚಿತ್ರವೆನಿಸಿದರೂ ಸಮಾಜದ ಒಳಿತಿಗಾಗಿ ಮತ್ತು ಅದರ ಅಭಿವೃದ್ಧಿಗಾಗಿ ಜಾತ್ರಾ ಮಹೋತ್ಸವಗಳು ಖರ್ಚುವೆಚ್ಚಗಳನ್ನು ಕಡಿಮೆ ಮಾಡಿ, ಸಾಂಕೇತಿಕವಾಗಿ ಅತಿ ಭಕ್ತಿಯಿಂದ ವಿಶ್ವಕರ್ಮ ಮಹೋತ್ಸವ ಆಚರಿಸಿ, ಪೂಜಿಸಿ, ಸರಳತೆಯಿಂದ ಆಚರಿಸಿ, ಕಲಾ ಪೋಷಕರಾಗುವುದೇ ನಿಜವಾದ ವಿಶ್ವಕರ್ಮ ಮಹೋತ್ಸವ.

ತಮ್ಮ ಚಿಂತಕ.

ಗಜಾನನ ಮ. ಸಾಬಣ್ಣವರ
ಚೇರಮನರು, ಹ್ಯಾಮರ್ಸನ್ಸ್ ಗೋಲ್ಡ್ ಆರ್ಟಿಕಲ್ಸ್ ಪ್ರೈವೇಟ್ ಲಿಮಿಟೆಡ್, ಬೆಳಗಾವಿ.
ಬೆಳ್ಳಿ ಮತ್ತು ಬಂಗಾರದ ಆಭರಣಗಳ ತಯಾರಕರು ಮತ್ತು ತರಬೇತಿದಾರರು.

10/09/2021

Want your business to be the top-listed Accountant in Belgaum?

Click here to claim your Sponsored Listing.

Location

Website

Address

Belgaum